Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಟಿ20 ವಿಶ್ವಕಪ್ ಮಧ್ಯೆಯೇ ಟೀಂ ಇಂಡಿಯಾಗೆ ಆಘಾತ: ತಂಡ ತೊರೆದ ಪ್ರಮುಖ ಆಟಗಾರ

Rinku Singh’s father dies: ಟಿ20 ವಿಶ್ವಕಪ್ ಮಧ್ಯೆಯೇ ಟೀಂ ಇಂಡಿಯಾಗೆ ಆಘಾತ: ತಂಡ ತೊರೆದ ಪ್ರಮುಖ ಆಟಗಾರ
ಟೀಂ ಇಂಡಿಯಾ ಆಟಗಾರ ರಿಂಕು ಸಿಂಗ್ ತಂದೆ ಖಾನ್​ಚಂದ್ ಸಿಂಗ್ ಲಿವರ್ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಟಿ20 ವಿಶ್ವಕಪ್ ಮಧ್ಯೆಯೇ ರಿಂಕು ಸಿಂಗ್‌ಗೆ ಈ ಆಘಾತ ಎದುರಾಗಿದೆ. ಹೀಗಾಗಿ ಅವರು ತಂಡವನ್ನು ತೊರೆದು ತವರಿಗೆ ವಾಪಸಾಗಿದ್ದಾರೆ. ಮುಂದಿನ ಪಂದ್ಯಗಳಿಗೆ ರಿಂಕು ಲಭ್ಯವಾಗುತ್ತಾರೆಯೇ ಎಂಬ ಬಗ್ಗೆ ಇನ್ನಷ್ಟೇ ಬಿಸಿಸಿಐ ಮಾಹಿತಿ ನೀಡಬೇಕಿದೆ.

ಟೀಂ ಇಂಡಿಯಾ (Team India) ಯುವ ಬ್ಯಾಟರ್ ರಿಂಕು ಸಿಂಗ್ (Rinku Singh) ತಂದೆ ಖಾನ್​ಚಂದ್ ಸಿಂಗ್ ಶುಕ್ರವಾರ ನಿಧನರಾದರು. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತಲ್ಲದೆ, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ನಿರಂತರ ಡಯಾಲಿಸಿಸ್‌ ಮಾಡಲಾಗುತ್ತಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ರಿಂಕು ಸಿಂಗ್ ಅವರು ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಟೀಂ ಇಂಡಿಯಾದ ಭಾಗವಾಗಿರುವಾಗಲೇ ಈ ದುಃಖಕರ ಘಟನೆ ಸಂಭವಿಸಿದೆ.ಕೆಲವು ದಿನಗಳ ಹಿಂದೆ ರಿಂಕು ಸಿಂಗ್ ತಂಡದಲ್ಲಿದ್ದಾಗಲೇ ತಂದೆಯ ಆರೋಗ್ಯ ಹದಗೆಟ್ಟ ಸುದ್ದಿ ತಲುಪಿತ್ತು. ಬಳಿಕ ಅವರು ತುರ್ತಾಗಿ ಮನೆಗೆ ತೆರಳಿ ಮತ್ತೆ ತಂಡಕ್ಕೆ ಮರಳಿದ್ದರು. ಇದೀಗ ತಂದೆಯ ನಿಧನದ ಸುದ್ದಿ ತಿಳಿದ ತಕ್ಷಣ ತಂಡವನ್ನು ತೊರೆದು ಸ್ವಗ್ರಾಮ ಅಲೀಗಢ್‌ಗೆ ಪ್ರಯಾಣ ಬೆಳೆಸಿದ್ದಾರ
ಗುರುವಾರ ರಾತ್ರಿ ಚೆನ್ನೈಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪ್ರಮುಖ ಪಂದ್ಯದಲ್ಲಿ ರಿಂಕು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ತಂಡದ ಸಮತೋಲನದ ದೃಷ್ಟಿಯಿಂದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ರಿಂಕು ತಂಡದೊಂದಿಗೇ ಇದ್ದು, ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು.
ಟಿ20 ವಿಶ್ವಕಪ್ ಮುಂದಿನ ಪಂದ್ಯಗಳಿಗೆ ಲಭ್ಯರಾಗುತ್ತಾರಾ ರಿಂಕು ಸಿಂಗ್?
ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಐದು ಪಂದ್ಯಗಳಲ್ಲಿ ಆಡಿದ್ದು 24 ರನ್ ಗಳಿಸಿದ್ದಾರೆ. ಫಿನಿಷರ್ ಪಾತ್ರದಲ್ಲಿ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಲಭ್ಯರಾಗುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಬಿಸಿಸಿಐ ಅಥವಾ ತಂಡದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ.
ರಿಂಕು ಸಿಂಗ್ ಅವರಿಗೆ ಪ್ಲೇಯಿಂಗ್ XIನಲ್ಲಿ ಸ್ಥಾನ ಸಿಗಲಿಲ್ಲ
ರಿಂಕು ಸಿಂಗ್ ಅವರ ತಂದೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದರು. ನಂತರ ಅವರು ತಕ್ಷಣ ಚೆನ್ನೈಗೆ ಮರಳಿದರು. ಆದಾಗ್ಯೂ, ತಂಡದ ಆಡಳಿತವು ಕಾಮಬಿನೇಷನ್ ಬದಲಾಯಿಸಿತು, ಇದರಿಂದಾಗಿ ಅವರು ಈ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡವು ಪ್ಲೇಯಿಂಗ್ XI ನಲ್ಲಿ ಎರಡು ಬದಲಾವಣೆಗಳನ್ನು ಮಾಡಿತು. ರಿಂಕು ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೊರಗಿಡಲಾಯಿತು. ಆದಾಗ್ಯೂ, ಭಾರತ ತಂಡವು ಜಿಂಬಾಬ್ವೆಯನ್ನು ದೊಡ್ಡ ಅಂತರದಿಂದ ಸೋಲಿಸಿತು.

ನೋವಿನ ನಡುವೆಯೂ ರಿಂಕು ಸಿಂಗ್ ಆಗಮನ
India vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ನಿರ್ಣಾಯಕ ಪಂದ್ಯವು ನಾಳೆ (ಮಾರ್ಚ್ 1) ನಡೆಯಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಸೆಮಿಫೈನಲ್​ಗೆ ಪ್ರವೇಶಿಸುತ್ತದೆ.

ರಿಂಕು ಆಗಮನ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್:
ರಿಂಕು ಸಿಂಗ್ ಅವರ ವೈಯಕ್ತಿಕ ನಷ್ಟದ ಹೊರತಾಗಿಯೂ, ಟೂರ್ನಿಯ ಅಂತಿಮ ಹಂತದಲ್ಲಿ ಅವರ ಫಿನಿಶಿಂಗ್ ಸಾಮರ್ಥ್ಯವು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಅದರಲ್ಲೂ ಭಾರತ ತಂಡವು ಕೊಲ್ಕತ್ತಾದಲ್ಲಿ ಪಂದ್ಯವಾಡುತ್ತಿರುವುದರಿಂದ ರಿಂಕು ಸಿಂಗ್ ಆಗಮನವು ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ಏಕೆಂದರೆ ಐಪಿಎಲ್​ನಲ್ಲಿ ಕಳೆದ ಕೆಲ ವರ್ಷಗಳಿಂದ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಕೊಲ್ಕತ್ತಾ ಪಿಚ್ ರಿಂಕು ಪಾಲಿಗೆ ತವರು ಮೈದಾನ ಇದ್ದಂತೆ.

ಇದೀಗ ನಿರ್ಣಾಯಕ ಪಂದ್ಯಕ್ಕೂ ಮುನ್ನ ಅವರು ಭಾರತ ತಂಡವನ್ನು ಕೂಡಿಕೊಳ್ಳಲು ಮನಸ್ಸು ಮಾಡಿದ್ದಾರೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಿಂಕು ಸಿಂಗ್ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಇದಾಗ್ಯೂ ಅವರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ನೀಡಲಿದ್ದಾರಾ ಎಂಬುದೇ ಈಗ ಕುತೂಹಲ.

ಇದನ್ನೂ ಓದಿ: T20 WorldCup: ಟಿ20 ವಿಶ್ವಕಪ್​ನಲ್ಲಿ ಸೆಮಿಸ್ ಸ್ಥಾನ ಖಚಿತಪಡಿಸಿಕೊಂಡ ದಕ್ಷಿಣ ಆಫ್ರಿಕಾ! ಭಾರತದ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ
ತಂದೆಯ ಅನಾರೋಗ್ಯದ ನಡುವೆ ಪಂದ್ಯವಾಡಲು ತೆರಳಿದ್ದ ರಿಂಕು!
ಇದರ ನಡುವೆಯೇ ರಿಂಕು ಸಿಂಗ್ ತಮ್ಮ ಕುಟುಂಬದ ಕಷ್ಟದ ಸಂದರ್ಭದಲ್ಲೂ ರಾಷ್ಟ್ರೀಯ ಕರ್ತವ್ಯಕ್ಕೆ ಮಹತ್ವ ನೀಡಿದರು. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ ಅವರು ಟೀಮ್ ಇಂಡಿಯಾಕ್ಕೆ ಮರಳಿದ್ದರು. ತಂದೆಯ ಆರೋಗ್ಯ ಗಂಭೀರವಾಗಿದ್ದರೂ, ದೇಶಕ್ಕಾಗಿ ಆಡಬೇಕೆಂಬ ನಿಷ್ಠೆಯಿಂದ ತಂಡ ಸೇರಿದ್ದರು. ಆದರೆ ಆ ಪಂದ್ಯದಲ್ಲಿ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಲಿಲ್ಲ. ಆದರೇ ಫೀಲ್ಡಿಂಗ್ ಮಾಡಲು ಅವಕಾಶ ದೊರೆತಿತ್ತು. ಆ ಸಮಯದಲ್ಲಿ ಅವರ ಮುಖದಲ್ಲಿ ಆತಂಕ ಮತ್ತು ದುಃಖ ಸ್ಪಷ್ಟವಾಗಿ ಕಾಣುತ್ತಿತ್ತು. ಒಂದು ವೇಳೆ ಅವರ ಕೈಯಿಂದ ಸುಲಭ ಕ್ಯಾಚ್ ಕೂಡ ತಪ್ಪಿತು. ಸಾಮಾನ್ಯವಾಗಿ ರಿಂಕು ಶಾಂತ ಮತ್ತು ಆತ್ಮವಿಶ್ವಾಸಿ ಆಟಗಾರರು. ಆದರೆ ಆ ದಿನ ಅವರ ಮನಸ್ಸು ಆಸ್ಪತ್ರೆಯಲ್ಲಿದ್ದ ತಂದೆಯತ್ತಲೇ ಇತ್ತು ಎನ್ನಲಾಗಿದೆ.
ಯಾವುದೇ ಒತ್ತಡ ಹಾಕದ ಟೀಂ ಇಂಡಿಯಾ ನಾಯಕ!
ಆ ಪಂದ್ಯದಲ್ಲಿ ತಂಡದ ನಾಯಕರಾಗಿದ್ದ ಸೂರ್ಯಕುಮಾರ ಯಾದವ್ ಅವರು ರಿಂಕು ಮೇಲೆ ಯಾವುದೇ ಒತ್ತಡ ಹಾಕಲಿಲ್ಲ. ಕ್ಯಾಚ್ ತಪ್ಪಿದರೂ ಏನೂ ಹೇಳದೇ ಬೆಂಬಲ ನೀಡಿದರು. ತಂಡದೊಳಗಿನ ಸಹಾನುಭೂತಿ ಮತ್ತು ಒಗ್ಗಟ್ಟು ಅದರಿಂದ ಕಾಣಿಸಿತು. ಪಂದ್ಯ ಮುಗಿದ ತಕ್ಷಣ ರಿಂಕು ಮತ್ತೆ ಆಸ್ಪತ್ರೆಗೆ ಧಾವಿಸಿದರು. ಆದರೆ ಆಗಲೇ ತುಂಬಾ ತಡವಾಗಿತ್ತು. ತಂದೆಯ ನಿಧನದ ಸುದ್ದಿ ಅವರಿಗೆ ದೊಡ್ಡ ಆಘಾತವಾಯಿತು. ಈಗ ಅವರು ಮನೆಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಲಿಗಢದ ಪ್ರತಿಭೆ ರಿಂಕು!
ರಿಂಕು ಸಿಂಗ್ ಉತ್ತರ ಪ್ರದೇಶದ ಅಲಿಗಢ ನಗರದವರು. ಅವರು ಸಾಮಾನ್ಯ ಕುಟುಂಬದಿಂದ ಬಂದವರು. ತಮ್ಮ ಕಠಿಣ ಪರಿಶ್ರಮದಿಂದ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕೊಲ್ಕತಾ ಪರ ಆಡುತ್ತಾ ಅವರು ಗಮನ ಸೆಳೆದರು. ವಿಶೇಷವಾಗಿ ಯಶ್​ ದಯಾಳ್​ ಅವರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದ ಕ್ಷಣವು ಅವರನ್ನು ದೇಶಾದ್ಯಂತ ಪ್ರಸಿದ್ಧರನ್ನಾಗಿಸಿತು. ಅದರ ಬಳಿಕ ರಿಂಕು ಹಿಂದಿರುಗಿ ನೋಡಲೇ ಇಲ್ಲ. ಅವರು ಭಾರತ ತಂಡದಲ್ಲಿ ಸ್ಥಾನ ಪಡೆದು ಹಲವು ಪ್ರಮುಖ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಒತ್ತಡದ ಸಂದರ್ಭಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಫಿನಿಷರ್ ಎಂಬ ಹೆಸರು ಗಳಿಸಿದರು. ಈಗ ಅವರ ಜೀವನದಲ್ಲಿ ದೊಡ್ಡ ವೈಯಕ್ತಿಕ ನಷ್ಟ ಸಂಭವಿಸಿದೆ. ಆದರೂ ದೇಶಕ್ಕಾಗಿ ಆಡಿದ ಅವರ ಮನೋಬಲ ಮತ್ತು ಕುಟುಂಬದ ಬಗ್ಗೆ ಇರುವ ಪ್ರೀತಿ ಎಲ್ಲರ ಮನಸೆಳೆಯುತ್ತಿದೆ. ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದವರು ಅವರಿಗೆ ಧೈರ್ಯ ಹೇಳುತ್ತಿದ್ದಾರೆ.